Sunday, October 16, 2011

"ಪರಿ"ಯ ಸಂಗೀತ ಪರಾಮರ್ಶೆ



ಇತ್ತೀಜೆಗಷ್ಟೇ ಬಹುತೇಕ ಎಲ್ಲ ಹೊಸಬರೆ ತುಂಬಿರುವ "ಪರಿ" ಚಿತ್ರದ ದ್ವನಿಸುರುಳಿ ಬಿಡುಗಡೆ ಆಗಿದೆ. ಅಮೇರಿಕದಲ್ಲಿ ಪ್ರಪ್ರತಮ ಬಾರಿಗೆ ದ್ವನಿಸುರುಳಿ ಬಿಡುಗಡೆ ಮಾಡಿಸಿಕೊಂಡ ಕನ್ನಡ ಚಿತ್ರವೆಂಬ ಹೆಗ್ಗಳಿಕೆ 'ಪರಿ'ಯದು. ದ್ವನಿಸುರುಳಿ ದಿಡುಗಡೆ ಸಮಾರಂಭದ ಆಹ್ವಾನ ಪತ್ರಿಕೆ ಕೂಡ ಹೊಸತನದಿಂದ ತುಂಬಿತ್ತು ಅನ್ನೋದು ವಿಶೇಷ. ಸರಿ ಇಷ್ಟೆಲ್ಲ ಹೊಸತನ, ವಿಶೇಷಗಳಿವೆ ಎಂದಮೇಲೆ ಹಾಡಲ್ಲೂ ಏನೋ ವಿಶೇಷತೆ, ಹೊಸತನ ಇರುತ್ತೆ ಅಂತ ಹಾಡು ಕೆಳೋಕೆ ಶುರು ಮಾಡಿದೆ...... ಈ ಸಂಗೀತ ಇಡುವಹಿ ನಿಜವಾಗಲೂ ವಿಶೇಷವಾಗಿ ಇದೆಯಾ??? ಒಂದೊಂದೇ ಹಾಡನ್ನು ಪರಾಮರ್ಶಿಸುತ್ತಾ ನೋಡೋಣ..

೧. ಮುಗಿಲಿನ ಮಾತು
ಇದೊಂದು ಪ್ರಣಯ ಗೀತೆ. ಸುಧೀರ್ ಅತ್ತಾವರ್ ರಚಿಸಿರುವ ಈ ಗೀತೆಗೆ ಉದಿತ್ ನಾರಾಯಣ್ ಹಾಗೂ "ಮರಳಿ ಮರೆಯಾಗಿ" ಸಧಾನ ಸರ್ಗಾಂ ದ್ವನಿಗೂಡಿಸಿದ್ದಾರೆ. ಸುಶ್ರಾವ್ಯ ಸಂಗೀತ ಸುಧೀರ್ ಅವರ ಅದ್ಬುತ ಸಾಹಿತ್ಯ ಪ್ರೇಮ ಲೋಕಕ್ಕೆ ಕರೆದೊಯ್ಯುವುದು ಕಚಿತ. You simply fall in love with the lyrics. ಇತ್ಥೀಚಿನ ದಿನಗಳಲ್ಲಿ ಅತಿವಿರಳ ಎನ್ನಬಹುದಾದ ಸಂಗೀತ ಸಾಹಿತ್ಯ ಸಮಾಗಮ ಹಾಗೂ ಸಂಯೋಜನೆ. ಕೈ repeat button press ಮಾಡಡಿದ್ರೆ ಕೇಳಿ....

೨. ಆಶಾಡ ಕಳದೈತೆ/ಜೋಕಾಲಿ
ಲಂಬಾಣಿ ಹಾಡಿನ ಬಿಟ್ನೊಂದಿಗೆ ಶುರು ಆಗುವ ಈ ಹಾಡು ಲಂಬಾಣಿ ತಾಂಡದಲ್ಲಿ ಜೀವನದ ಶ್ರವಣ ಸ್ವಾಗತಿಸುವ ಹಾಡು. ಸಂಗೀತ ಸಂಯೋಜನೆ ಚನ್ನಾಗಿದೆ. ಹಾಡಿದವರ ದೊಡ್ಡ ಪಟ್ತಿನೇ ಇದೆ, ಬಿ ಕೆ ಸುಮಿತ್ರ, ಮಾಣಿಕ್ಯ ವಿನಯಗಮ್, ಮೈಸುರು ಜೆನ್ನೀ, ಸಮನ್ವಿತ, ಹೀರಬಾಯಿ, ಮತ್ತು ಕಾಳಿಬಾಯಿ.

೩. ಮಿರುಗುತಿದೆ ಎದೆಯೊಳಗೆ
ಶಾನ್ ಹಾಗೂ ಗಾಯಿತ್ರಿ ಗಾಂಜವಾಲ ಹಾಡಿರುವ ಈ ಹಾಡು ಎ ಆರ್ ರೆಹ್ಮಾನ್ ಸ್ಲೋ ಟ್ರ್ಯಾಕ್ಸ್ ಲಿಸ್ಟ್ ಗೆ ಸೇರುತ್ತೆ.. Very melodious.

೪. ಕಂಡಿಕೇರಿ ಹುಡುಗ್ರನ್ನ
ಐಟಮ್ ಹಾಡು. ಮತ್ತು ಮತ್ತು ಗಮ್ಮತ್ತು..... ಹಾಡಲ್ಲಿ ಲೋಟಕ್ಕೆ ಎಣ್ಣೆ ಬಿಳೂ ಶಬ್ದ ನಿರ್ದೇಶಕ ಕೇಳಿಸಿದ್ರೆ ಪ್ರಿಯ ಹಿಮೆಶ್ ತಮ್ಮ ದ್ವನಿಯಿಂದ ನಶೆ ಏರಿಸ್ತಾರೆ.. ನಾನು ಏನು ಕಮ್ಮಿ ಇಲ್ಲ ಅನ್ನುವ ಸುಧೀರ್ ಅವರ ತುಂಟ ಸಾಹಿತ್ಯ.. ಭಾವ ಬಾಮೈದ ಚಿತ್ರದ "ಶೆಂದಕಿದೆ" ಹಾಗೂ "ಜಂಗಲ್ ಹಕ್ಕಿ" ಹಾಡಿನ ಸಾಲಿಗೆ ಸೇರುತ್ತೆ..

೫. ನಿನ್ನ ಪ್ರೇಮದ ಪರಿಯ
ಈ ಚಿತ್ರದ ಹೆಸರಿನ ಪ್ರೇರಣೆಯೇ ಈ ಹಾಡು. ಕೇ ಎಸ್ ನ ಅವರ ಕವನಕ್ಕೆ ಸೀ ಅಶ್ವಥ್ ಸಂಗೀತ. ಮೂಲ ಸಂಗೀತ ಉಳಿಸಿಕೊಳ್ಳಲಾಗಿದ್ದು, ಎಸ್ ಪಿ ಬಿ ಹಾಡಿದ್ದರೆ.. ಹಾಡು ಮುಗಿಯುವ ಹೊತ್ತಿಗೆ ಅಶ್ವಥ್ ನೆನಪಾಗಿ ಮನತುಂಬಿಬಂದರೆ ಅಸ್ಚರ್ಯವಿಲ್ಲ.. ಅವರಿಗೆ ಸಂಗೀತ ಗುಚ್ಛದ ಅರ್ಪಣೆ ಸಮರ್ಪಕವಾಗಿದೆ.

೬. ಪರಿ ಥೀಮ್  
ವಾದ್ಯ ಸಂಗೀತ. Composition and orchestration ಚನ್ನಾಗಿದೆ.. "ಪರಿ"ಯ ಪರಿ ಹೇಗೆ ಇರಬಹುದೆಂಬ ಕುರುಹು ಇಲ್ಲಿದೆ. Instrumental ಇಷ್ಟ ಪಡುವವರಿಗೆ ಕಂಡಿತ collectionನಲ್ಲಿ ಇರಬೇಕಾದ ಹಾಡು.

೭. ಜುಂ ಜುಂ ಸಾರ.... ಶಾರಿರಾರಾ
ವಿದೇಶಿ ಶೈಲಿಯ ಹಾಡನ್ನು ಉಷಾ ಉತ್ತುಪ್ ಹಾಡಿದ್ದರೆ. ಹಳೆ ಕನ್ನಡ ಹಾಡಿನ ಬಿಸಿ ಬಿಸಿ ಚಿತ್ರಾನ್ನ.. ಉಷಾ ಎಂದರೆನೇ high voltageಗೆ ಅನ್ವರ್ಥ ನಾಮ ಇನ್ನು ಅದು ಈ ಹಾಡಲ್ಲಿ ಇಲ್ಲ ಅಂದ್ರೆ ಹೇಗೆ?



ಅಂದ ಹಾಗೆ ಈ ಚಿತ್ರದ ಸಂಗೀತ ನಿರ್ದೇಶಕ ಯಾರು ಅಂತ ಹೇಳಲೇ ಇಲ್ಲ ಅಲ್ವಾ, ಅವರೇ ಕಣ್ರೀ "ಕಾರಂಜಿ" ವೀರ್ ಸಮರ್ಥ. ಈ ಗುಚ್ಚದಲಿ ವೈವಿದ್ಯತೆಗೆ ಆಧ್ಯತೆ ನೀಡಿರುವುದು ಕಾಣಸಿಗುತ್ತದೆ, ಒಂದೊಂದು ಹಾಡು ಒಂದೊಂದು ತರಹ, ಸ್ವರ ವಿನ್ಯಾಸ, ಇಂಪಾದ ಸಂಗೀತ, ಭಾವ ಗೀತೆ, ಐಟಮ್ ಹಾಡು, ಜಾನಪದ ಶೈಲಿ ಹಾಡು, ಪಾಶ್ಚಾತ್ಯ ಶೈಲಿಯ ಹಾಡು.

ಸುಧೀರ್ ಅತ್ತಾವರ್ ಅವರು ತಮ್ಮ ಚಿತ್ರ ಸಾಹಿತ್ಯದಲ್ಲಿನ ವೈವಿದ್ಯತೆ ಮೆರೆದಿದ್ದಾರೆ. ಕೈಕೀಣಿ ಅವರಂತೆ ಪ್ರಣಯ ಗೀತೆ, ಹಂಸಲೆಕಾ ಅವರಂತೆ ಐಟಮ್ ಹಾಡು ರಚಿಸಬಲ್ಲರು. ಮರಳಿ ಮರೆಯಾಗಿ, ಮಾತಿಗೆ ಮಾತಿಲ್ಲ, ಎಲೆ ಮೇಲೆ, ಮುಗಿಲಿನ ಮಾತು, ಕಂಡಿಕೇರಿ ಹುಡುಗ್ರನ್ನ........ ಥ್ಯಾಂಕ್ ಯೂ, ಥ್ಯಾಂಕ್ ಯೂ....

This is the film album that should be in your music collection because of the wonderful mixture of 'Desi and Videsi' music measured well and some beautiful lyrics.

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕೆಳಗೆ ವ್ಯಾಖ್ಯಾನಿಸಿ.....

Note: If you can't read click here for kannada fonts.

3 comments:

art-e-harate said...

You are right. PARIE songs "SOBAGININDA KUDIVE".
- Arunkumar R T

Divija said...

Very melodius songs which takes you to new world.

moon123 said...

cool review narayan :)